ನವದೆಹಲಿ, ಡಿ.27- ಓಮಿಕ್ರಾನ್ ಆತಂಕದ ನಡುವೆಯೂ ವಿಶ್ವದ ಬಹಳಷ್ಟು ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚಳವಾಗಿದ್ದು, ಹೊಸ ಅಲೆಯ ಭೀತಿ ಸೃಷ್ಟಿಸಿದೆ. ದಕ್ಷಿಣ ಆಫ್ರಿಕಾ, ಬ್ರಿಟನ್, ಫ್ರಾನ್ಸ್, ಇಟಲಿ ಸೇರಿ ಹಲವು ರಾಷ್ಟ್ರಗಳಲ್ಲಿ ಒಂದು ವಾರದಿಂಚೀಗೆ ಸೋಂಕಿನ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗುತ್ತಿದೆ. ಎರಡನೇ ಅಲೆ ತಗ್ಗಿದ ಮೇಲೆ ಬಹಳಷ್ಟು ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿತ್ತು. ಆದರೆ ಇದ್ದಕ್ಕಿದ್ದಂತೆ ಹೆಚ್ಚಳವಾಗಲಾರಂಭಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸೇವೆಗಳ ನಿರ್ದೇಶಕ ಮೈಕೇಲ್ ರೈನ್ ಅವರು, ಓಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿದೆಯಾದರೂ, ಡೆಲ್ಟಾ ರೂಪಾಂತರದಂತೆ ಅಪಾಯಕಾರಿ ರೋಗಗಳನ್ನು ಉಂಟು ಮಾಡಬಹುದು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಈಗಾಗಲೇ ಲಭ್ಯ ಇರುವ ಲಸಿಕೆಗಳೇ ಜನರನ್ನು ಓಮಿಕ್ರಾನ್‍ನಿಂದ ರಕ್ಷಿಸಲಿವೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.